ನಮ್ಮ ಸಂಸ್ಥೆಯ ಬಗ್ಗೆ

ಬಾಪೂಜಿ ವಿದ್ಯಾ ಸಂಸ್ಥೆ(ರಿ), ಬಾಪೂಜಿ ಕ್ಯಾಂಪಸ್, ಟಿ.ಆರ್.ನಗರ, ಚಳ್ಳಕೆರೆ ಈ ಸಂಸ್ಥೆಯು ಎಸ್.ಸಿ./ ಎಸ್.ಟಿ. ಸಂಸ್ಥೆಯಾಗಿದ್ದು ಸನ್ಮಾನ್ಯ ಶ್ರೀ ಮಾಜಿ ಉನ್ನತ ಶಿಕ್ಷಣ ಸಚಿವರಾದ ಡಿ.ಮಂಜುನಾಥ್ ಇವರು ಸ್ಥಾಪಕ ಅಧ್ಯಕ್ಷರಾಗಿ ಕಟ್ಟಿ ಬೆಳೆಸಿದ ಈ ಸಂಸ್ಥೆಯು ಇಂದು ಹಲವಾರು ಶಾಲಾ ಕಾಲೇಜುಗಳನ್ನು ಒಳಗೊಂಡು ಬಯಲುಸೀಮೆಯ ಈ ಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಬಡ ವಿದ್ಯಾರ್ಥಿಗಳ ಆಶಾದೀಪವಾಗಿ ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಬೆಳೆಯುತ್ತಾ ಬಂದಿದೆ. ಇದರಡಿಯಲ್ಲಿ ಬಾಪೂಜಿ ಪ್ರಥಮ ದರ್ಜೆ ಕಾಲೇಜು ನಗರದಲ್ಲಿ 1993-94ನೇ ಸಾಲಿನಿಂದಲೂ ನಗರ/ಗ್ರಾಮೀಣ ಪ್ರದೇಶದ ಎಲ್ಲಾ ವರ್ಗಗಳ ಪ್ರತಿಭೆಗಳಿಗೆ ಉನ್ನತ ಶಿಕ್ಷಣದ ಅವಕಾಶ ಒದಗಿಸಿ ಜಾಗತೀಕರಣದ ಅವಕಾಶಗಳೊಂದಿಗೆ, ವೈಚಾರಿಕತೆಯ, ಸುಸಂಸ್ಕೃತ ಪರಂಪರೆಯ ಮೌಲ್ಯಗಳನ್ನು, ಆತ್ಮ ವಿಶ್ವಾಸವುಳ್ಳ ಮನೋಭಾವದ ಯುವ ಜನಾಂಗವನ್ನು ರೂಪಿಸು ಪ್ರಯತ್ನ ಮಾಡುತ್ತಿದೆ. ಅರ್ಹ ಪ್ರಾಧ್ಯಾಪಕರ ವರ್ಗ ಹಾಗೂ ಬೋಧಕೇತರ ವರ್ಗವನ್ನು ಒಳಗೊಂದ ತಂಡ ಸಮರ್ಪಣಾ ಭಾವದಿಂದ ದುಡಿಯುತ್ತಿದೆ. ಕಲಾ ಮತ್ತು ವಾಣಿಜ್ಯ ವಿಭಾಗಗಳನ್ನು ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಿತು. ಪ್ರಾರಂಭದಲ್ಲಿ ನಮ್ಮ ಕಾಲೇಜು ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ, ಇದರ ಅಡಿಯಲ್ಲಿ ಇದ್ದು ಈಗ ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಸೇರಿದೆ.

ನಮ್ಮ ಕಾಲೇಜು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಇದ್ದು ಈ ಕಾಲೇಜು ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುತ್ತದೆ. ವ್ಯವಸ್ಥಿತವಾದ ಪಾಠಕೊಠಡಿಗಳು, ಗ್ರಂಥಾಲಯ, ಹಾಗೂ ಕ್ರೀಡೆಗೆ ಮತ್ತು ಇತರೆ ಚಟುವಟಿಕೆಗಳಿಗಾಗಿ ವ್ಯವಸ್ಥಿತವಾದ ಕ್ರೀಡಾಂಗಣವನ್ನು ಹೊಂದಿದೆ.
ನಮ್ಮ ಕಾಲೇಜು ಸಶಕ್ತರಾದ ಮತ್ತು ಅನುಭವವುಳ್ಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನೊಳಗೊಂಡಿದೆ.
ನಮ್ಮ ಕಾಲೇಜು ಬಿ.ಎ. ಹಾಗೂ ಬಿ.ಕಾಂ. ಪದವಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದು ಈ ಕಾಲೇಜು ಸರ್ಕಾರದ ಅನುದಾನಕ್ಕೊಳಪಟ್ಟಿರುತ್ತದೆ.

ನಮ್ಮ ಕಾಲೇಜಿನ ಮೊದಲನೇ ಮಹಡಿಯಲ್ಲಿಯೇ ಪ್ರಾಂಶುಪಾಲರು ಹಾಗೂ ಇನ್ನಿತರೆ ವಿಭಾಗಗಳು (ವ್ಯವಹಾರ ಹಾಗೂ ಪರೀಕ್ಷಾ ವಿಭಾಗ) ವಿದ್ಯಾರ್ಥಿಗಳಿಗೆ ಕಾಣಸಿಗುತ್ತವೆ. ನಮ್ಮ ಕಾಲೇಜಿನ ಕ್ಯಾಂಪಸ್ ನಲ್ಲಿ ಸುವ್ಯವಸ್ಥಿತವಾಗಿರುವ ‘ಬಾಪೂಜಿ ಸಭಾಂಗಣ’ ಹೊಂದಿದ್ದು ಇಲ್ಲಿ ಸೆಮಿನಾರ್ ಗಳು, ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಕಾಲೇಜು ಮಹಿಳೆಯರಿಗಾಗಿ ವಿಶೇಷವಾಗಿ ಶೌಚಾಲಯ ವ್ಯವಸ್ಥೆಯನ್ನು ಕೂಡ ಒದಗಿಸುತ್ತಿದೆ. ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ವ್ಯವಸ್ಥಿತವಾದ ಹಾಗೂ ಶುಚಿಯಾದ ನೀರು ಹಾಗೂ ಆಹಾರವನ್ನು ಒದಗಿಸುವ ಕ್ಯಾಂಟೀನ್ ವ್ಯವಸ್ಥೆ ಇರುತ್ತದೆ.
ನಮ್ಮ ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿದೆ. ವಿದ್ಯಾರ್ಥಿಗಳಿಗೆ ಮೌಲ್ಯಯುತವಾದ ವಿದ್ಯಾಭ್ಯಾಸವನ್ನು ಕೊಡುವುದರ ಮುಖಾಂತರ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹಾಗೂ ಅವರ ಏಳಿಗೆಗೆ ಶ್ರಮಿಸುತ್ತಿದೆ. ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಪ್ರತಿಯೊಬ್ಬ ವಿದ್ಯಾರ್ಥಿ ದೇಶದ ಸತ್ಪ್ರಜೆಯನ್ನಾಗಿಸಲು ಪ್ರಯತ್ನಿಸುತ್ತಿದೆ