ಬಾಪೂಜಿ ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ-577522 ಈ ಕಾಲೇಜು ಚಿತ್ರದುರ್ಗದಿಂದ 30 ಕಿ.ಮೀ. ಇದೆ. ಚಳ್ಳಕೆರೆ ಸುಮಾರು ವರ್ಷಗಳಿಂದ ಆಯಿಲ್ ಸಿಟಿ ಎಂದೇ ಹೆಸರುವಾಸಿಯಾಗಿದೆ, ಏಕೆಂದರೆ ಇಲ್ಲಿ ಉಪಸ್ಥಿತರಿರುವ ಸುಮಾರು ಆಯಿಲ್ ಮಿಲ್ ಗಳಿಂದ ಈ ಹೆಸರು ಬಂದಿದೆ. ಚಳ್ಳಕೆರೆಯ ಜನಸಂಖ್ಯೆಯಲ್ಲಿ ಹೆಚ್ಚಿನದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿದ್ದು ಈ ಚಳ್ಳಕೆರೆಯು ಬೆಂಗಳೂರು ನಗರದಿಂದ 202 ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿ 4 ಇಲ್ಲಿ ಉಪಸ್ಥಿತವಿದೆ. ಚಳ್ಳಕೆರೆ ನಗರವು ರಾಜ್ಯಾದ್ಯಾಂತ ಸುಮಾರು ನಗರಗಳಿಗೆ ರೈಲ್ವೆ ವ್ಯವಸ್ಥೆಯನ್ನು ಹೊಂದಿದೆ. ಇಂತಹ ಸುಂದರವಾದ ಚಳ್ಳಕೆರೆ ನಗರದಲ್ಲಿ ನಮ್ಮ ಬಾಪೂಜಿ ವಿದ್ಯಾ ಸಂಸ್ಥೆಯು ಸುಮಾರು ವರ್ಷಗಳಿಂದ ತನ್ನದೇ ಚಾಪನ್ನು ಮೂಡಿಸಿದೆ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬೆಳವಣಿಗೆಯನ್ನು ಹೊಂದಲು ಪ್ರೇರೇಪಿಸುತ್ತಿದೆ.
ಬಾಪೂಜಿ ವಿದ್ಯಾ ಸಂಸ್ಥೆ(ರಿ), ಬಾಪೂಜಿ ಕ್ಯಾಂಪಸ್, ಟಿ.ಆರ್.ನಗರ, ಚಳ್ಳಕೆರೆ ಈ ಸಂಸ್ಥೆಯು ಎಸ್.ಸಿ./ ಎಸ್.ಟಿ. ಸಂಸ್ಥೆಯಾಗಿದ್ದು ಈ ಸಂಸ್ಥೆಯು ಸನ್ಮಾನ್ಯ ಶ್ರೀ ಡಿ.ಮಂಜುನಾಥ್ ರವರು ಅಧ್ಯಕ್ಷರು ಹಾಗೂ ಮಾಜಿ ಉನ್ನತ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ, ಇವರಿಂದ 1972ರಲ್ಲಿ ಆರಂಭವಾಗಿದ್ದು ಈ ಸಂಸ್ಥೆಯಡಿಯಲ್ಲಿ ಪ್ರಾಥಮಿಕದಿಂದ ಉನ್ನತಶಿಕ್ಷಣದವರೆಗೂ ಉತ್ತಮ ಶಿಕ್ಷಣವನ್ನು ಒದಗಿಸುತ್ತಿದೆ.